ಮನಸ್ವಿ ಮೊಬೈಲ್ ಟಾಕ್…

Advertisements

ಒಂದು ವಾರದ ಹಿಂದೆ ನೆಡೆದ ಘಟನೆ, ನಾನು ಮೆಸೇಜ್ ಕಳುಹಿಸಲು ಪ್ರಯತ್ನಿಸಿದೆ ಹೋಗುತ್ತಿಲ್ಲ, ಕರೆ ಮಾಡಲು ಪ್ರಯತ್ನಿಸಿದೆ ನಿಮ್ಮ ಖಾತೆಯಲ್ಲಿ ಕರೆಮಾಡಲು ಸಾಕಷ್ಟು ಹಣವಿಲ್ಲ ಎಂದು ಹೇಳತೊಡಗಿದಾಗ ನನ್ನ ಮೊಬೈಲ್ ಬ್ಯಾಲೆನ್ಸ್ ನೋಡಿ ಹೌಹಾರಿ ಹೋದೆ, ಆಮೇಲೆ ಗ್ರಾಹಕ ಸೇವಾಕೇಂದ್ರ(ಕಸ್ಟಮರ್ ಕೇರ್) ಕ್ಕೆ ಫೋನಾಯಿಸಿ ಕೇಳಿದಾಗ ತಿಳಿದಿದ್ದು ಬಿಎಸ್ಎನ್ಎಲ್ ನ ೯೪೮೨೦ ಸರಣಿಯ ಎಲ್ಲಾ ನಂಬರುಗಳಲ್ಲಿ ತಾಂತ್ರಿಕ ತೊಂದರೆಯಿಂದ ಹೀಗೆ ಆಗಿತ್ತೆಂದು, ೪, ೫ ದಿನದ ನಂತರ ಸರಿಯಾಯಿತು.
Negative balence

ಅಂದ ಹಾಗೆ ಟ್ರಾಯ್  ನವರು ಎಲ್ಲಾ ಮೊಬೈಲ್ ಆಪರೇಟರುಗಳಿಗೆ ಸೆಕೆಂಡುಗಳಿಗೆ ಪಾವತಿ ಮಾಡುವ ಗ್ರಾಹಕ ಸ್ನೇಹಿ ದರ ಪಟ್ಟಿ ಬಿಡುಗಡೆ ಮಾಡುವಂತೆ ಸೂಚಿಸುವ ಲಕ್ಷಣಗಳಿವೆ, ಹಾಗೇನಾದರೂ ಕಟ್ಟು ನಿಟ್ಟಿನ ಆದೇಶ ಹೊರಡಿಸಿದಲ್ಲಿ ಗ್ರಾಹಕರಿಗೆ ಹಬ್ಬದ ಪ್ರಯುಕ್ತ ಒಂದು ಒಳ್ಳೆಯ ಕೊಡುಗೆ ಸಿಕ್ಕಂತಾಗುತ್ತದೆ.

ಅಂತೂ ಬಿಎಸ್ಎನ್ಎಲ್ ಮಸ್ತ್ ಮೆಗಾ ಪ್ಲಾನ್ ನಲ್ಲಿ ಬರಿ ೨೦೦೦ ಎಸ್ಎಮ್ಎಸ್ ಗೆ 1.50ಪೈಸೆ ಬದಲು ಈಗ ೫೦ಪೈಸೆ ದೈನಿಕ ಬಾಡಿಗೆ ಕಟ್ಟಬೇಕು, ಮಾಸಿಕ ಬಾಡಿಗೆ ೧೫ರೂಪಾಯಿ ಕಟ್ಟಲೇ ಬೇಕು ಎಸ್ ಎಮ್ ಎಸ್ ಕಳುಹಿಸಲಿ ಬಿಡಲಿ, ಬಿಎಸ್ಎನ್ಎಲ್ ಮಾಫಿ ಮಾಡಿದ್ದು ತಿಳಿಸಿದ್ದು ಹೀಗೆ!
bsnl mast mega

ಮಸ್ತ್ ಮೆಗಾ ಪ್ಲಾನ್ ನ  ದರ ಪಟ್ಟಿ ಹೀಗಿದೆ

tariff

tariff

ಬಿಂದಾಸ್ ಪ್ಲಾನ್ ಬಗ್ಗೆ ಯೋಚಿಸಿ!!

bindas

ಸಿಮ್ ನ ಬೆಲೆಯು 54 ರೂಪಾಯಿಗಳು

ಪ್ರತಿ ತಿಂಗಳು ರೀಚಾರ್ಜ್ ಮಾಡಿಸಲೇ ಬೇಕಾಗಿದ್ದು 45 ರೂಪಾಯಿಗಳು

ಕರೆಯ ದರ ೧ಪೈಸೆ/ಸೆಕೆಂಡ್ ಗೆ, ಒಂದು ನಿಮಿಷ ಮಾತನಾಡಿದರೆ ನಷ್ಟ! ಏಕೆಂದರೆ 60 ಪೈಸೆ ಕರೆ ದರ ಅನ್ವಯವಾಗುತ್ತದೆ,ಮಿಸ್ ಕಾಲ್ ಕೊಡುವ ಬದಲು 10 ಪೈಸೆ ವ್ಯಯ ಮಾಡಿ ಎಲ್ಲಿದ್ದೀಯಾ ಕೇಳಬಹುದು! ಫ್ಯಾಮಿಲಿ ಅಂಡ್ ಫ್ರೆಂಡ್ಸ್ ಸೌಲಭ್ಯವಿಲ್ಲ 20 ಪೈಸೆಗೆ 5ನಂಬರಿಗೆ ಕರೆ ಮಾಡುವ ಸೌಲಭ್ಯವಿಲ್ಲ. ಏನಿದೆ ಮತ್ತೆ ಅಂದ್ರಾ?

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿರಿ

ಕೊನೆಯ ಮಾತು:ನಾನು ಬಿಎಸ್ಎನ್ಎಲ್  ಬಗ್ಗೆ ಮಾತ್ರ ಏಕೆ ಬರೆಯುತ್ತೇನೆಂದರೆ ಬೇರೆ ಯಾವುದೇ ಮೊಬೈಲ್ ಕಂಪನಿಗಳು ಹಳ್ಳಿಗಳ ಬಗ್ಗೆ ಯೋಚಿಸುತ್ತಿಲ್ಲ,ನೆಟ್ ವರ್ಕ್ ಸಹ ಇಲ್ಲ, ಸದ್ಯಕ್ಕೆ ಹೆಚ್ಚಿನ ಹಳ್ಳಿಗಳಲ್ಲಿ ಬಿಎಸ್ಎನ್ಎಲ್ ಮಾತ್ರ ತನ್ನ ಅಲ್ಪ ಪ್ರಮಾಣದ ಸೇವೆ ಒದಗಿಸುತ್ತಿದೆ, ಹೌದು ಅಲ್ಪ ಪ್ರಮಾಣದ ಸೇವೆಯೆಂದೇ ಹೇಳಬೇಕು ಏಕೆಂದರೆ ಮೊಬೈಲ್ ರಿಂಗ್ ಆದ ತಕ್ಷಣ ಮನೆಯೊಳಗೆ ಮಾತನಾಡಲು ಆಗದಿದ್ದರೂ  ಹೊರಗೆ ಓಡಿ ಬಂದು ಮಾತಾಡುವ ಮಟ್ಟಕ್ಕಾದರೂ ಸಿಗ್ನ್ ಲ್ ಸಿಗುತ್ತಿದೆ!

ತುಂಬಾ ದಿನದ ನಂತರ ನನ್ನ ಬ್ಲಾಗನ್ನು ಅಪ್ಡೇಟ್ ಮಾಡುತ್ತಿದ್ದೇನೆ, ಏನೂ ವಿಷಯ ಇರಲಿಲ್ಲ ಅಂತಾನೋ, ಸೋಮಾರಿತನ ಅಂತಾನೋ, ಬ್ಲಾಗ್ ಅಪ್ಡೇಟ್ ಮಾಡಿರಲೇ ಇಲ್ಲ, ಆದರೆ ಕಳೆದ ಒಂದು ವಾರದಲ್ಲಿ ನೆಡೆದ ಘಟನೆಗಳು..ನಿನ್ನೆ ನೆಡೆದ ಅಂತಿಮ ಸುತ್ತಿನ ಮಾತುಕತೆಯಿಂದ ನನಗೆ ಸಂತೋಷ ಉಂಟಾಗಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಇದು ನನಗೆ ಮತ್ತು ನೊಂದ ಗ್ರಾಹಕರಿಗೆ ಸಿಕ್ಕ ಗೆಲುವು.

ಈ ತರಹ ಹೇಳಿದರೆ ಖಂಡಿತಾ ತಲೆ ಬುಡ ಅರ್ಥವಾಗುವುದಿಲ್ಲ..ಅದಕ್ಕೆ ಸುದೀರ್ಘವಾಗಿ ಬರೆದಿರುವುದನ್ನು ಓದಿ,ಸದಾಶಿವ ಮಾವನ ರಿಲಾಯೆನ್ಸ್ ಮೊಬೈಲ್ ಹ್ಯಾಂಡ್ ಸೆಟ್ ಇತ್ತು, ಅದನ್ನು ನನ್ನ ಸೋದರತ್ತೆ ಪ್ರೀತಿಯಿಂದ ಕೊಟ್ಟಿದ್ದರು, ಇದು ಇಲ್ಲಿ ಯಾರು ಬಳಸುತ್ತಿಲ್ಲ ಹೊಸ ನಂಬರ್ ಆಕ್ಟಿವೇಟ್ ಮಾಡಿಸಿಕೊಳ್ಳಲು ಬಂದರೆ ಮಾಡಿಸಿ ಉಪಯೋಗಿಸು ಎಂದು, ನಾನು ಅದನ್ನು ಅಪ್ಪನಿಗೆ ಕೊಡುವುದಾಗಿ ಹೇಳಿ ಮನೆಗೆ ತಂದಿದ್ದೆ, ಸಾಗರದಲ್ಲಿ ನಾನು ರಿಲಾಯೆನ್ಸ್ ನ ಹಳೆಯ ಹ್ಯಾಂಡ್ ಸೆಟ್ ಗೆ ಹೊಸ ನಂಬರ್ ಆಕ್ಟಿವೇಟ್ ಮಾಡಿಸಿಕೊಳ್ಳಲು ಹೋದಾಗ ಆರಂಭವಾಯಿತು ರಗಳೆಗಳ ಸರಮಾಲೆ.

ಸಾಗರದ ಅಶೋಕ ರೋಡಿನಲ್ಲಿ ಸ್ಪಾರ್ಕ್ ಎನ್ನುವ ಅಂಗಡಿಯಿದೆ, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಸಾಗರ ಹೋಟೆಲ್ ಸರ್ಕಲ್ಲಿನಿಂದ ಸ್ವಲ್ಪ ಮೇಲೆ ಅಶೋಕ ರೋಡಿನಲ್ಲಿ ಹೋದರೆ ಪೈ ಐಸ್ ಲ್ಯಾಂಡ್ ಎನ್ನುವ ಹೋಟೆಲ್ ಸಿಗುತ್ತದೆ, ಅದರ ಎದುರುಗಡೆಯ ಓಣಿಯಲ್ಲಿ ಇರುವುದೇ ಸ್ಪಾರ್ಕ್! ಅದು ಮೊದಲು ಬರಿಯ ಸೀಡಿ, ಡೀವಿಡಿಗಳನ್ನು ಬಾಡಿಗೆ ಕೊಡುತ್ತಿದ್ದ ದಟ್ಟಾ ದರಿದ್ರ(ಪದ ಪ್ರಯೋಗ ಏಕೆ ಬಂತು ಎಂದು ನೀವು ಕೇಳಿದರೆ ನಾನು ಹೇಳಲು ಹೋದರೆ ನನ್ನ ನಾಲಿಗೆ ಹೊಲಸಾಗುತ್ತದೆ)ಅಂಗಡಿಯಾಗಿತ್ತು, ಅದರ ಮಾಲಿಕನೇ ಈಗ ಸಾಗರವೆಂಬ ಸುಂದರವಾದ ಸಾಂಸ್ಕೃತಿಕ ಕಲೆ, ಸಾಹಿತ್ಯಕ್ಕೆ ಹೆಸರುವಾಸಿಯಾದ ಊರಿಗೆ ದುತ್ತೆಂದು ರಿಲಾಯೆನ್ಸ್ ಮೊಬೈಲ್ ಡೀಲರ್ ಆಗಿಬಿಟ್ಟಿದ್ದಾನೆ.(ನನಗೆ ಬಂದಿರುವ ಕೋಪಕ್ಕೆ, ಆಗಿರುವ ಅನ್ಯಾಯಕ್ಕೆ ಕೆಲವು ಕಡೆ ಏಕವಚನ ಪ್ರಯೋಗ ಬಳಸಿದ್ದೇನೆ ದಯವಿಟ್ಟು ಕ್ಷಮಿಸಿ, ಆತನಿಗೆ ಗೌರವ ಕೊಟ್ಟು ಮಾತನಾಡುವುದು ನನ್ನಿಂದ ಸಾಧ್ಯವಾಗುತ್ತಿಲ್ಲ)

ಈಗ ಸ್ಪಾರ್ಕ್ ಎನ್ನುವ ಸೀಡಿ ಅಂಗಡಿ ಡೀಲರ್ ಆಫೀಸ್ ಆಗಿ ಬದಲಾಗಿ ಬಿಟ್ಟಿದೆ,ನಾನು ಬೇರೆ ಅಂಗಡಿಗಳಿಗೆ GSk ಹೋಗಿ ತರಿಸಿ ಕೊಡಿ ಎಂದು ಹೇಳುವ ಬದಲು ಡೀಲರ್ ಹತ್ತಿರವೇ ರಿಲಾಯೆನ್ಸ್ ನವರ 99ರುಪಾಯಿಯ GSK (Global Startup Kit)
ಕೇಳಿದರೆ ಕೆಲ ನಿಮಿಷಗಳಲ್ಲಿ ಎಲ್ಲ ಕೆಲಸವೂ ಆಗುತ್ತದೆ, ಹೇಗೂ ಅಡ್ರೆಸ್ ಪ್ರೂಫ್ ಬಂದಿದೆ ಎಂದು ಡೀಲರ್ ಫೋನ್ ಮಾಡಿ ಹೇಳಿದ ತಕ್ಷಣವೇ ಹೊಸ ನಂಬರ್ ಚಾಲನೆಗೊಳ್ಳುತ್ತದೆ ಎನ್ನುವುದು ನನ್ನ ಊಹೆಯಾಗಿತ್ತು..ಆದರೆ ಅಲ್ಲಿ ನೆಡೆದದ್ದೆ ಬೇರೆ, ಡೀಲರ್ ಹೇಳಿದ್ದಿಷ್ಟು “ಒಂದೇ ಒಂದು GSKಗೆ ಆರ್ಡರ್ ಹಾಕಿದರೆ ಕಳುಹಿಸುವುದಿಲ್ಲ ಅದಕ್ಕಾಗಿ ತರಿಸಿಕೊಡಲಾಗುವುದಿಲ್ಲ” ಎಂದು ಹೇಳಿದ, ಇದನ್ನು ಕೇಳಿದ ನಾನು ನನಗೆ ಗೊತ್ತಿದ್ದ ವಿಷಯವನ್ನು ಆತನಲ್ಲಿ ಹೇಳಿದೆ,GSK ಅಂದರೆ ಮತ್ತೇನೂ ಅಲ್ಲ ಅದೊಂದು ರೀಚಾರ್ಜ್ ಕಾರ್ಡ್ ನ ತರಹದ್ದೇ ಸ್ಕ್ರ್ಯಾಚ್ ಕಾರ್ಡ್.. ಅದರಲ್ಲಿರುವ ಸಂಖ್ಯೆಗಳನ್ನು ರಿಲಾಯೆನ್ಸ್ ನ ಹೊಸ ನಂಬರ್ ಚಾಲನೆಗೊಳಿಸುವ ನಂಬರಿಗೆ ಕರೆ ಮಾಡಿ ಕಾರ್ಡಿನಲ್ಲಿ ಮುದ್ರಿತವಾದ ಕೆಲವು ಗುಪ್ತ ಸಂಖ್ಯೆಗಳನ್ನು ಫೀಡ್ ಮಾಡಿ ಅದು ಹೇಳುವ ಆಯ್ಕೆಗಳನ್ನು ಅನುಸರಿಸಿ ಮುಗಿದ ನಂತರ ಕೆಲ ನಿಮಿಷಗಳ ಕಾಲ ಸ್ವಿಚ್ ಆಫ್ ಮಾಡಿ ಆನ್ ಮಾಡಿದರೆ ಹೊಸ ನಂಬರ್ ಬಳಸಲು ಸಿದ್ದವಾಗಿರುತ್ತದೆ, ನಿಮಗಿದು ಗೊತ್ತಿರೋದೇ.. ಅದೂ ಅಲ್ಲದೆ ನಿಮಗೆ ಪರಿಚಿತದವರಿಗೆ ಅಥವಾ ನಿಮ್ಮ ರಿಲಾಯೆನ್ಸ್ ವೆಬ್ ವರ್ಡ್ ಆಫೀಸಿಗೆ ಫೋನ್ ಮಾಡಿ ಅಥವಾ ನಿಮ್ಮ ಮೈನ್ ಡೀಲರ್ ಹತ್ತಿರ ಮಾತಾಡಿ GSK ನಂಬರ್ ತಿಳಿದುಕೊಂಡು ಆಕ್ಟಿವೇಟ್ ಮಾಡಿಸಿಕೊಡಿ ಎಂದು ಕೇಳಿದೆ, ಅದಕ್ಕೆ ಒಪ್ಪದ ಡೀಲರ್ ಶಿವಮೊಗ್ಗಕ್ಕೆ ಬೇಕಾದರೆ ಹೋಗಿ ಎನ್ನುವ ಒರಟು ವಾದಕ್ಕೆ ಇಳಿದ, ಆತನಲ್ಲೇನು ಹೆಚ್ಚಿಗೆ ಮಾತು ಎಂದು ನಾನು ಸುಮ್ಮನೆ ಬಂದು ಸಾಗರದ ಇತರ ಅಂಗಡಿಗಳಲ್ಲೂ ವಿಚಾರಿಸಿದೆ, ಅವರೂ ಇಲ್ಲಿಯ ಡೀಲರ್ ಸರಿ ಇಲ್ಲ, ನೀವು ಶಿವಮೊಗ್ಗಕ್ಕೆ ಹೋಗಿ ಅಲ್ಲಿಯೇ ಹೊಸ ನಂಬರ್ ಆಕ್ಟಿವೇಶನ್ ಮಾಡಿಸಿಕೊಂಡು ಬಂದರೆ ರಗಳೆಯಿರುವುದಿಲ್ಲ ಎಂದು ತಿಳಿಸಿದರು..

ಆದದ್ದಾಗಲಿ ಎಂದು ಶಿವಮೊಗ್ಗಕ್ಕೆ ಹೋಗಿ ಹೊಸ ನಂಬರ್ ಆಕ್ಟಿವೇಶನ್ ಕೂಡಾ ಮಾಡಿಸಿಕೊಂಡೆ, ಆದರೆ ಇಲ್ಲಿ ನನಗಾದ ನಷ್ಟ ತುಂಬಿಕೊಡುವರು ಯಾರು? ಸಾಗರದಿಂದ ಶಿವಮೊಗ್ಗ ಪಟ್ಟಣಕ್ಕೆ ಬಸ್ ಪ್ರಯಾಣದರ ಒಮ್ಮೆ ಹೋಗಲು 40ರೂಪಾಯಿಗಳು … ಹೋಗಿ ಬರಲು ಆದ ವೆಚ್ಚ 80ರೂಪಾಯಿಗಳು, ಜೊತೆಗೆ ನನ್ನ ಊಟ ಮತ್ತು ಆಟೋದಲ್ಲಿ ಓಡಾಡಿದ ಖರ್ಚು ಎಲ್ಲವೂ ಸೇರಿ 60 ರೂಪಾಯಿ, ಅಂದರೆ 99ರೂಪಾಯಿ GSK ಕೊಳ್ಳಲು ನನಗೆ ಬಂದ ಖರ್ಚು ಅಥವಾ ನಷ್ಟ ಒಟ್ಟು ಬರೋಬ್ಬರಿ 140ರೂಪಾಯಿ.

ಹೇಗೂ ಹೊಸ ನಂಬರ್ ಅಂತು ಸಿಕ್ಕಿತಲ್ಲ ಎಂದು ಆದ ರಗಳೆಗಳನ್ನು ಮರೆಯುವ ಹಂತಕ್ಕೆ ತಲುಪಿದ್ದೆ, ಆದರೆ ಆಗಿದ್ದೇ ಬೇರೆ, ನನ್ನ ಹೊಸಾ ನಂಬರ್ ಅಡ್ರೆಸ್ ಪ್ರೂಫ್ ಇನ್ನೊಮ್ಮೆ ಸಬ್ಮಿಟ್ ಮಾಡಿ ಎನ್ನುವ IVRS(Instant voice response system)ನಿಂದ ಕರೆ ಬಂದಿತು ಇಲ್ಲವಾದಲ್ಲಿ ನಿಮ್ಮ ನಂಬರನ್ನು ಲಾಕ್ ಮಾಡಲಾಗುತ್ತದೆ ಎನ್ನುವುದು ಇದರ ಸಾರಾಂಶವಾಗಿತ್ತು, ಅದನ್ನು ಕೇಳಿದ ತಕ್ಷಣ ನಾನು ರಿಲಾಯೆನ್ಸ್ ಕಷ್ಟಮರ್ ಕೇರ್ ನವರೊಂದಿಗೆ ಮಾತನಾಡಿ ಏನಾಗಿದೆ ಯಾಕೆ ಬ್ಲಾಕ್ ಮಾಡುತ್ತಾರೆ ಎನ್ನುವುದನ್ನು ಕೇಳಿದೆ, ಅದಕ್ಕೆ ಅವರು ನಿಮ್ಮ ಅಡ್ರೆಸ್ ಪ್ರೂಫ್ ಇನ್ನೊಮ್ಮೆ ಕೊಡಿ ನಿಮ್ಮ ಹತ್ತಿರದ ರಿಲಾಯೆನ್ಸ್ ಶಾಪ್ ನಲ್ಲಿ ಅಥವಾ ನಿಮ್ಮ ಹತ್ತಿರದ ಡೀಲರನ್ನು ಸಂಪರ್ಕಿಸಿ ಎಂದು ತಿಳಿಸಿದರು,

ನಾನು ನೇರವಾಗಿ ಡೀಲರ್ ಆಫೀಸಿಗೆ ಹೋದೆ ಆಗ ಸುಮಾರು ಮಧ್ಯಾಹ್ನ ನಾಲ್ಕು ಘಂಟೆಯ ಸಮಯವಾಗಿತ್ತು, ಆಗ ಆತ ತನ್ನ ಆಫೀಸನ್ನು ಮುಚ್ಚಿ ಪೇಟೆ ತಿರುಗಲು ಹೋಗಿದ್ದ, ನಾನು ಆ ಮಹಾನುಭಾವನಿಗೆ ಕರೆ ಮಾಡಿ ಎಲ್ಲಿದ್ದೀರಾ ಎಂದು ವಿಚಾರಿಸಿದೆ,ಆತ ತಾನು ಪೇಟೆಯಲ್ಲೆಲ್ಲೋ ಇದ್ದೇನೆ ಬೇರೆ ಕೆಲಸವಿದೆ ತಡವಾಗುತ್ತದೆ ಎಂದು ಮತ್ತದೇ ಬೇಕಾದರೆ ಕಾಯ್ತಾ ಇರಿ ಎನ್ನುವ ಧಾಟಿಯಲ್ಲಿ ಮಾತನಾಡತೊಡಗಿದ, ನಾನು ಫೋನ್ ಇಟ್ಟೆ, ನನಗೆ ಪರಿಚಯವಿದ್ದ ಒಬ್ಬರ ಅಂಗಡಿಗೆ ಹೋಗಿ ಹೀಗೆ ಹೀಗೆ ಆಗಿದೆ ಆದ್ದರಿಂದ ರಿಲಾಯೆನ್ಸ್ ಅಡ್ರೆಸ್ ಪ್ರೂಫ್ ಸಬ್ಮಿಟ್ ಮಾಡುವ ಫಾರಂ ಕೊಡಿ ಎಂದು ಕೇಳಿದೆ, ಅಷ್ಟರಲ್ಲಿ ರಿಲಾಯೆನ್ಸ್ ಡೀಲರಿನ ವಿಲನ್ ಎಂಟ್ರಿ ಆಗಿಯೇ ಬಿಟ್ಟಿತು… ಅಂಗಡಿಯವರು ನಮ್ಮಲ್ಲಿಲ್ಲ ಇಲ್ಲೇ ಇದಾರಲ್ಲ ಡೀಲರನ್ನೇ ಕೇಳಿ ಎಂದು ಹೇಳಿದರು, ನಾನು ಎಷ್ಟು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತೀರಿ ಫಾರಂ ಫಿಲ್ ಮಾಡಿ ಅಡ್ರೆಸ್ ಪ್ರೂಫ್ ಕೊಟ್ಟು ಹೋಗುತ್ತೇನೆ ಎಂದು ಹೇಳುತ್ತಿದ್ದ ಹಾಗೆ ಈ ಅಸ್ಸಾಮಿ ಉಲ್ಟಾ ಹೊಡೆಯಲು ಆರಂಭಿಸಿದ, ಇಲ್ಲಾರಿ ನೀವು ಎಲ್ಲಿ ನಂಬರ್ activation ಮಾಡಿಸಿದ್ದೀರೋ ಅಲ್ಲೇ ಕೊಡಿ ಪ್ರೂಫ್ ನ ನಾನು ಏಕೆ ತೆಗೆದುಕೊಳ್ಳಲಿ ಎಂದು ಮಾತನಾಡ ತೊಡಗಿದ, ಅರೆ ಇದೊಳ್ಳೆ ಕಥೆಯಾಯಿತು ನಿಮ್ಮದು ನೀವೇ ತಾನೆ ಶಿವಮೊಗ್ಗಕ್ಕೆ ಹೋಗಿ ಎಂದು ಹೇಳಿದ್ದು ಅದಕ್ಕೆ ಹೋದೆ ಎಂದು ನಾನು ಹೇಳುತ್ತಿದ್ದ ಹಾಗೆ ಅತ್ಯಂತ ಒರಟಾಗಿ ಇಲ್ಲಾರಿ ಆಗಲ್ಲ ಹೆಚ್ಚಿಗೆ ಮಾತನಾಡಬೇಡಿ ಎಂದು ಹೇಳತೊಡಗಿದ, ನನಗೆ ಕೋಪ ನೆತ್ತಿಗೇರತೊಡಗಿತ್ತು ಆದರೂ ಸಮಾದಾನದಿಂದ ಏನು ಹಾಗೆ ಮಾತನಾಡುತ್ತೀರ ಈಗೇನು ನಿಮ್ಮಿಂದ ಆಗುತ್ತದೆಯೋ ಇಲ್ಲವಾ ಹೇಳಿ ಎಂದೆ?, ಮತ್ತೆ ಅವನು ಒರಟಾಗಿ(ಪ್ರತಿಸಾರಿ ಒರಟಾಗಿ ಅಂತ ಬರಿಬೇಕಾ!) ಧ್ವನಿ ಆಗೋದಿಲ್ಲಾರಿ ಎಂದು ಹೇಳಿದ, ಆಗೋದೆ ಇಲ್ಲಾ ಅಂದ್ರೆ ಕಂಪ್ಲೆಂಟ್ ಮಾಡ್ತೀನಿ ಎಂದು ಹೇಳಿದೆ, ಅದಕ್ಕೆ ಆತ ಏನು ಮಾಡ್ಕೋತಿರಾ ಮಾಡ್ಕೊಳೀ ಎನ್ನುವ ಮಾತನ್ನು ಆಡಿಯೇ ಬಿಟ್ಟಾ…. ಆತನ ಮನಸ್ಸಿನಲ್ಲಿ ನಾನು ಪೋಲೀಸ್ ಸ್ಟೇಷನ್ನಿಗೆ ಹೋಗಿ ಕಂಪ್ಲೆಂಟ್ ಕೊಡುತ್ತೇನೆ ಅಂದುಕೊಂಡನೋ ಏನೋ, ಹೇಗೂ ಕೃಷ್ಣನ ಜನ್ಮಸ್ಥಾನ ತನಗೇನೂ ಹೊಸದಲ್ಲ ಅದೂ ಅಲ್ಲದೆ ಮಾವನ ಮನೆಯವರು ಪರಿಚಯದವರೇ, ತನ್ನನ್ನು ಏನೂ ಮಾಡೋಲ್ಲ ಅಂತ ಅನ್ಕೊಂಡಿದ್ದನೋ ಏನೋ?…

ಇಷ್ಟೆಲ್ಲಾ ಮಾತನಾಡಿದ ಆತನಿಗೆ ನನ್ನಿಂದ ಏನು ಮಾಡಲು ಸಾಧ್ಯ ಎಂದು ತೋರಿಸಲೇ ಬೇಕೆಂಬ ಛಲ ನನ್ನಲ್ಲಿ ಬಂದಿತ್ತು, ನಾನು ಮೊದಲು ರಿಲಾಯೆನ್ಸ್ ಕಷ್ಟಮರ್ ಕೇರ್ ಗೆ ಕರೆ ಮಾಡಿ ಸಾಗರದ ಡೀಲರ್ ಏನೇನು ಹೇಳಿದನೆಂದು ತಿಳಿಸಿ ಆತನ ಮೇಲೆ ಕಂಪ್ಲೆಂಟ್ ತೆಗೆದುಕೊಳ್ಳಲು ತಿಳಿಸಿದೆ ಹಾಗೂ ಕಂಪ್ಲೆಂಟ್ ಡಾಕೆಟ್ ನಂಬರ್ ತೆಗೆದುಕೊಂಡೆ(ನೆನಪಿನಲ್ಲಿ ಇಟ್ಟುಕೊಳ್ಳಿ ಕಷ್ಟಮರ್ ಕೇರ್ ಗೆ ಕಂಪ್ಲೆಂಟ್ ಕೊಟ್ಟಾಗ ಮರೆಯದೇ ಡಾಕೆಟ್ ನಂಬರನ್ನು ಪಡೆದುಕೊಳ್ಳಿ, ಮುಂದೆ ನೀವು ಈ ನಂಬರನ್ನು ತಿಳಿಸಿ ಕಂಪ್ಲೆಂಟ್ ಏನಾಯಿತು, ಏನು ನಿರ್ಧಾರಕ್ಕೆ ಬಂದಿದ್ದಾರೆ, ಏನು ಕ್ರಮ ತೆಗೆದುಕೊಂಡಿದ್ದಾರೆ ಎಲ್ಲವನ್ನು ತಿಳಿಯಬಹುದು, ಇಲ್ಲಿ ನೀವು ಎರಡನೇ ಬಾರಿ ಮಾತನಾಡಬೇಕಾದರೆ ಕೆಲವು ಕ್ರಮಗಳನ್ನು ಅನುಸರಿಸಿ,ನಾನೊಂದು ಕಂಪ್ಲೆಂಟ್ ದಾಖಲಿಸಿದ್ದೆ ಅದರ ಡಾಕೆಟ್ ನಂಬರ್ ಇದು. ಕಂಪ್ಲೆಂಟ್ ಸ್ಟೇಟಸ್ ನೋಡಬೇಕಾಗಿದೆ,ಅಥವಾ ಕಂಪ್ಲೆಂಟ್ ಓಪನ್ ಇದೆಯಾ,ಏನು ವರದಿ ಕೊಟ್ಟಿದ್ದಾರೆ ಎಲ್ಲವನ್ನು ಕೇಳಿ ನೋಡಿ.) ಹಾಗೂ ನೋಡಲ್ ಆಫೀಸರಿನ ದೂರವಾಣಿ ನಂಬರ್, ವಿಳಾಸ, ಹಾಗೂ ಈ ಮೇಲ್ ವಿಳಾಸ ಎಲ್ಲವನ್ನು ಪಡೆದುಕೊಂಡೆ. ಅವರ ಈಮೇಲ್ ಐಡಿಗೆ ಒಂದು ದೂರು ಕಳಿಸಿದೆ, ನನಗೂ ಸ್ವಾಭಿಮಾನ ಇದೆ, ಏನು ಮಾಡ್ಕೋಳಕ್ಕೆ ಆಗುತ್ತೆ ಅಂತ ಸಾಗರದ ಘನಂದಾರಿ ಡೀಲರ್ ಗೆ ಶ್ಯಾಂಪಲ್ಲು ತೋರಿಸಿಯೇ ಬಿಡಬೇಕೆನ್ನುವ ನಿರ್ಧಾರಕ್ಕೆ ಆ ಕ್ಷಣಕ್ಕೆ ಬಂದಿದ್ದೆ ಅದಕ್ಕೆ ತಕ್ಕದಾಗಿ ನೆಡೆದುಕೊಂಡೆ.

ಇನ್ನೂ ಇಪ್ಪತ್ನಾಲ್ಕು ಘಂಟೆಗಳು ಕಳೆದಿರಲಿಲ್ಲ ನಾನು ಮಿಂಚಂಚೆ(ಈಮೇಲ್) ಕಳಿಸಿ, ನನ್ನ ಬ್ಲಾಕ್ ಆಗಿದ್ದ ಮೊಬೈಲ್ ಮರು ಜೀವ ಪಡೆದುಕೊಂಡಿತ್ತು, ಮೇಲಿಂದ ಮೇಲೆ ಔಟ್ ಗೋಯಿಂಗ್ ಸರಿ ಆಗಿದೆ ಸಾರ್ ಅಂತ ಒಂದು ಫೋನು, ಈಗ ಎಲ್ಲಾ ಸರಿ ಇದೆ ಅಲ್ವಾ ಮತ್ತೇನಾದ್ರೂ ಪ್ರಾಬ್ಲಂ ಇದ್ರೆ ಹೇಳಿ ಅನ್ನೋದೇನೂ,… ಇವಕ್ಕೆಲ್ಲ ಸರಿ ಇದೆ ಎಂದು ಉತ್ತರಿಸಿ ಕೆಲ ನಿಮಿಷಗಳ ನಂತರ ಮತ್ತೊಂದು ಕರೆ ಬಂದಿತು,ಅವರು ಸಾರ್ ಸಾಗರದ ಡೀಲರ್ ಮೇಲೆ ಕಂಪ್ಲೆಂಟ್ ಕೊಟ್ಟಿದ್ರಾ ಕೇಳಿದ್ರು… ಹೌದು ನೀವ್ಯಾರು ಕೇಳಿದೆ, ಆಗ ಅವರು ತಮ್ಮ ಪರಿಚಯ ಮಾಡಿಕೊಂಡರು ಅವರು ಕರ್ನಾಟಕದ ರಿಲಾಯೆನ್ಸ್ ನ ಪ್ರಧಾನ ವಿತರಕರು ಮತ್ತು ಪ್ರಧಾನ ಹಂಚಿಕೆದಾರರು ಅಂದರೆ ಅವರು ಇಡಿಯ ಕರ್ನಾಟಕಕ್ಕೆ ಮುಖ್ಯ ಡೀಲರ್ ಮತ್ತು ಡಿಸ್ಟ್ರಿಬ್ಯೂಟರ್ ಅಂತೆ, ಅವರು ನಮ್ಮ ಸಾಗರದ ಡೀಲರ್ ಕೆಟ್ಟದಾಗಿ ವರ್ತಿಸಿದರಾ ಕೇಳಿದರು ಅದಕ್ಕೆ ನಾನು ಹೌದು ಎಂದು ತಿಳಿಸಿದೆ.

ಲೈನಿನಲ್ಲೆ ಇರುವಂತೆ ತಿಳಿಸಿ ಸಾಗರದ ಡೀಲರಿಗೆ ಕಾಲ್ ಮಾಡಿದರು, ಏನ್ರಿ ಕಷ್ಟಮರ್ ಜೊತೆ ಕೆಟ್ಟದಾಗಿ ಮಾತಾಡಿದ್ರಂತೆ ಏನು ಮಾಡ್ಕೋತೀರಾ ಅಂದ್ರತೆ ಅಂತ ವಿಚಾರಿಸಿಕೊಳ್ಳಲು ಹತ್ತಿದರು, ಆತ ಸಮಜಾಯಿಶಿ ಕೊಡಲು ತೊಡಗಿದೆ, ಈಗ ಮಾತನಾಡುವ ಬಾರಿ ನನ್ನದಾಗಿತ್ತು, ಏನು ಹೇಳಲೇ ಇಲ್ಲಾ ಅಂದ್ರೆ ನೀವು ಹೇಳಿದ್ದಕ್ಕೆ ಕಂಪ್ಲೆಂಟ್ ಮಾಡಿದ್ದು ನಮಗೇನು ಬೇರೆ ಕೆಲ್ಸಾ ಇಲ್ಲಾ ಅನ್ಕೊಂಡ್ರಾ ಅಂದೆ,ಸ್ಪಾರ್ಕ್ ನವನಿಗೆ ಏನಾಗುತ್ತಿದೆ ಎಂದು ಸುಧಾರಿಸಿಕೊಳ್ಳಲು ಕೆಲ ನಿಮಿಷಗಳು ಹಿಡಿದವು, ಅಂತದ್ದೊಂದು ಕಾನ್ಪರೆನ್ಸ್ ಕಾಲ್ ಮಾಡಲು ಬರುತ್ತದೆ ಎನ್ನುವುದಾದರೂ ಗೊತ್ತಿತ್ತಾ ಇಲ್ವೋ… ಮತ್ತೆ ಸುಧಾರಿಸಿಕೊಂಡು ಧ್ವನಿ ಏರಿಸಿ ನೀವು Rash ಆಗಿ ಮಾತನಾಡಿದ್ದಕ್ಕೆ ನಾನು Rash ಆಗಿ ಮಾತನಾಡಿದೆ ಎನ್ನತೊಡಗಿದ, ನಾನು ವರಟಾಗಿ ಮಾತಾಡಿಲ್ಲ ಎನ್ನುವುದನ್ನು ನನ್ನ ಕಾನ್ವಿಡೆನ್ಸ್ ಭರಿತವಾದ ಏರಿದ ಧ್ವನಿಯಲ್ಲಿ ನಾನು ತಿಳಿಸಿದೆ, ಇದು ಡಿಸ್ಟ್ರಿಬ್ಯೂಟರ್ ನ ಮನಸಿಗೆ ನಾಟಿತು, ಸ್ಪಾರ್ಕ್ ನವನಿಗೆ ಶಾಕ್ ನೀಡಲು ಆರಂಭಿಸಿದರು, ಗ್ರಾಹಕರಿಗೆ ಯಾರಿಗೇ ಆದ್ರೂ ಸಿಟ್ಟು ಬಂದಾಗ ಮಾತಾಡೋ ಧಾಟಿ ಹಾಗೇನೆ ಇರೋದು ಅದಕ್ಕೆ ನೀವು ಒಬ್ಬ ಡೀಲರ್ ಆಗಿ ಕೆಟ್ಟದಾಗಿ ಮಾತಾಡೋದು ಒರಟಾಗಿ ನೆಡ್ಕೊಳೋದು ಮಾಡ್ಬಾರ್ದು, ನಿಮ್ಮಿಂದ ನನ್ನ ರೆಪ್ಯುಟೇಶನ್ ಹಾಳಾಯ್ತು…ಹೀಗೆ ಆದ್ರೆ ನನ್ನ ತಲೆ ಹೋಗುತ್ತೆ(ತನ್ನ ಕೆಲಸ ಹೋಗುತ್ತೆ ಎನ್ನುವರ್ಥದಲ್ಲಿ) ಲಾಸ್ಟ್ ಟೈಂ ವಾರ್ನ್ ಮಾಡ್ತೀನಿ ಇಂತದ್ದು ಮುಂದೆ ಪುನಾರಾವರ್ತನೆ ಆಗಬಾರದು, ಯಾರೇ ಗ್ರಾಹಕರು ಬಂದ್ರೂ ಏನೇ ಫಾರಂ ಕೇಳಿದರೆ, ಮಾಹಿತಿ ಕೇಳಿದರೆ ಕೊಡಿ, ನಿಮ್ಮ ಆಫೀಸಲ್ಲಿ ಕಂಪ್ಯೂಟರ್ ಇದೆ ತಾನೆ ಅಪ್ಡೇಟ್ ಮಾಡೋಕೆ, ಅಡ್ರೆಸ್ ಪ್ರೂಫ್ ತಗೋಳಕ್ಕೆ ಆಗಲ್ವಾ ಅಂತ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ, ಹಾಗೆಯೇ.. ನನ್ನನ್ನು ಉದ್ದೇಶಿಸಿ ದಯವಿಟ್ಟು ಕ್ಷಮಿಸಿ ಮುಂದೆ ಹೀಗೆ ಯಾರಿಗೂ ಆಗೋಲ್ಲ, ಮತ್ತೆ ಕಂಪ್ಲೆಂಟ್ ಕೊಡ್ಬೇಡಿ ಸಾರ್, ಇಂತದ್ದು ಇನ್ನು ಆಗದಂತೆ ಎಚ್ಚರವಹಿಸುತ್ತೇನೆ ಅಂತ ಭರವಸೆಯನ್ನು ಕೊಟ್ಟಿದ್ದಾರೆ.

ಇದು ನೊಂದ ಗ್ರಾಹಕರಿಗೆ ಸಿಕ್ಕ ಜಯ, ಗ್ರಾಹಕರನ್ನು ಸಾಮಾನ್ಯ, ಇವರಿಂದ ಏನೂ ಮಾಡ್ಕೊಳಕ್ಕೆ ಆಗೋಲ್ಲ ಎನ್ನೋ ಧೋರಣೆ ಯಾರಿಗಾದರೂ ಇದ್ದರೆ ಅವರಿಗೊಂದು ನಿದರ್ಶನವಾದಿತು.

ಮೊಬೈಲ್ ಕಂಪನಿಗಳ ರಗಳೆ ಮತ್ತು ಸ್ವಲ್ಪ ಮಾಹಿತಿ

ನಿಮ್ಮ ಗಮನಕ್ಕೆ, ಇದೇ ಲೇಖನವನ್ನು ನನ್ನ ಹಾಗೇ ಸುಮ್ಮನೆ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇನೆ, ಮೊಬೈಲ್ ಬಗೆಗಿನ ಲೇಖನಗಳು ಒಂದೇ ಕಡೆ ಇರಲಿ ಎನ್ನುವ ಕಾರಣದಿಂದ ಪುನಃ ಇಲ್ಲಿ ಪ್ರಕಟಿಸುತಿದ್ದೇನೆ

ಇವತ್ತು ಮೊಬೈಲ್ ಇಲ್ಲದೆ ಜೀವನ ಮುಂದೆ ಸಾಗುವುದೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನಾವು ಮೊಬೈಲ್ ನ ಮೇಲೆ ಅವಲಂಬಿತವಾಗಿದ್ದೇವೆ.. ಸಂಪರ್ಕ ಸಾದಿಸುವ ಬಹು ಮುಖ್ಯ ಅಂಗ ಈ ಸಂಚಾರಿ ದೂರವಾಣಿ ಎಂದರೆ ತಪ್ಪಾಗಲಾರದು,

ಇಂದು ಉನ್ನತ ತಂತ್ರಜ್ಞಾನದ ಮೊಬೈಲ್ ಸಾದನಗಳು ಅಗ್ಗದ ದರಗಳಲ್ಲಿ ದೊರೆಯುತ್ತಿವೆ…ಮೊಬೈಲ್ ಕಂಪೆನಿಗಳು ಉತ್ಕೃಷ್ಟ ದ್ವನಿ ಸ್ಪಷ್ಟತೆ, ಬರಿ ಎಸ್.ಎಂ.ಎಸ್ ಅಲ್ಲದೆ ಎಮ್.ಎಮ್.ಎಸ್, ಜಿ ಪಿ ಆರ್ ಎಸ್ ನಂತ ಮೂರನೇ

ತಲೆಮಾರಿನ ಸೇವೆಗಳನ್ನು ಒದಗಿಸುತ್ತಿವೆ.. ಅತ್ಯುತ್ತಮ ಸಿಗ್ನಲ್ ಕವರೇಜ್* (*ಸಿಟಿ ಲಿಮಿಟ್ ನಲ್ಲಿ )ನೀಡಲು ಶಕ್ತವಾಗಿವೆ
ಈಗ ಮೊಬೈಲ್ ಒಂದಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸದೇ ಇರದು!
ಇದು ಮೊಬೈಲ್ ಜಗತ್ತಿನ ಮೇಲಿನ ನೋಟ! ಮೊಬೈಲ್ ಕಂಪೆನಿಗಳ ಉಪದ್ರವಕ್ಕೆ ಒಳಗಾದ ಗ್ರಾಹಕರು ಅದೆಷ್ಟಿರಬಹುದು? ನೂರಕ್ಕೆ ತೊಂಬತ್ತೆಂಟು ಜನ ಗ್ರಾಹಕರು ಮೊಬೈಲ್ ಕಂಪೆನಿಗಳಿಂದ ಒಂದಲ್ಲ ಒಂದು ಬಾರಿ ಸಂಕಷ್ಟಕ್ಕೆ

ಒಳಗಾಗಿರುತ್ತಾರೆ ಎನ್ನುವುದು ನನ್ನ ಅನಿಸಿಕೆ! ಕಡೆಯ ಪಕ್ಷ ಕೆಲವೊಮ್ಮೆ ಒಂದು ಎಸ್.ಎಂ ಎಸ್ಸು ಕಳಿಸಲಾಗದೆ ಪರೆದಾಡಿರುತ್ತಾರೆ!

ಮೊಬೈಲ್ ಸಿಂ ಕಾರ್ಡ್ ಆಕ್ಟಿವೇಶನ್ ಆದ ತಕ್ಷಣದಿಂದಲೇ ಮೊಬೈಲ್ ಕಂಪೆನಿಗಳ ಉಪದ್ರಗಳು ಆರಂಭವಾಗಿ ಬಿಡುತ್ತವೆಯೇನೋ?! 2 ದಿನದೊಳಗೆ
ಅಡ್ರೆಸ್ಸ್ ಪ್ರೂಫ್ ಕೊಟ್ಟಿಲ್ಲ ಎನ್ನುವ ತಕರಾರಿನ ಕರೆ ಬರಬಹುದು, ಕಾಲ್ ಸೆಂಟರ್ ನಿಂದ! ಇಲ್ಲ ಸಬ್ಮಿಟ್ ಮಾಡಿದ್ದೇವೆ ಎಂದು ಸಮಜಾಯಿಷಿ ಕೊಟ್ಟರೆ ಮುಗಿಯಿತು ಎಂದು ಕೊಂಡಿರ?…ಊಹು ಮತ್ತೊಂದು ಎರೆಡು ಮೂರು ದಿನ ಬಿಟ್ಟು

ಅಡ್ರೆಸ್ಸ್ ಪ್ರೂಫ್ ನ ವೆರಿಫಯ್ ಮಾಡಿ ಎನ್ನುವ ಕರೆ ಬಂದರು ಆಶ್ಚರ್ಯ ಪಡಬೇಕಾಗಿಲ್ಲ, ಇಲ್ಲಿ ಅಕಸ್ಮಾತ್ ಅಡ್ರೆಸ್ಸ್ ಪ್ರೂಫ್ನಲ್ಲಿನಲ್ಲಿ ಇದ್ದ ಹಾಗೆ ಹೇಳದೆ ಹೋದರೆ 2ಗಂಟೆಯೊಳಗೆ ನಿಮ್ಮ Outgoing ಸೇವೆ ಬ್ಲಾಕ್ ಆಗಿರುತ್ತದೆ!

ಇನ್ನು ಕೆಲವು ಕಸ್ಟಮರ್ ಕೇರ್ ನ ಗ್ರಾಹಕ ಸ್ನೇಹಿ ಎಕ್ಸಿಕ್ಯೂಟೀವ್ ಗಳು ನಾವಂದುಕೊಂಡಿದ್ದಕ್ಕಿಂತ ಬೇಗನೆ ನಮ್ಮ ದೂರುಗಳನ್ನು ಪರಿಹರಿಸುತ್ತಾರೆ ಹಾಗು ಅರ್ಥವಾಗುವಂತೆ ಮಾಹಿತಿಯನ್ನು ನೀಡುತ್ತಾರೆ
ಮೊಬೈಲ್ ಕಂಪೆನಿಗಳು ಕಾಲರ್ ಟ್ಯೂನ್ ನಿಂದ ಅತ್ಯದಿಕ ವರಮಾನಗಳನ್ನು ಪಡೆಯುತ್ತಿವೆ, ಸ್ವಯಂಚಾಲಿತ ಕರೆಗಳು ನಿಮಗೆ ಕಂಪನಿಯ ವತಿಯಿಂದ ಮಾಡಲಾಗುತ್ತದೆ ಕಾಲರ್ ಟ್ಯೂನ್ ಗಳನ್ನು ಹಾಕಿಸಿಕೊಳ್ಳುವಂತೆ ಮಾಡಲು ” ನಿಮಗೆ

ಕರೆ ಮಾಡುವವರಿಗೆ ಅದೇ ಹಳೆಯ ಟ್ರಿಂಗ್ ಟ್ರಿಂಗ್ ರಿಂಗ್ ಕೇಳಿಸಿ ಬೋರ್ ಆಗಿದೆಯೇ.. ನಿಮ್ಮ ಮೆಚ್ಚಿನ ಗೀತೆಯನ್ನು ಕೇಳಿಸಿರಿ ” ಎಂದು ಮಧುರವಾದ ದ್ವನಿ ಉಲಿಯುತ್ತದೆ.. ಹಾಗು ಕೆಲವು ಗೀತೆಗಳನ್ನು ನಿಮಗೆ ಉಚಿತವಾಗಿ

ಕೇಳಿಸಲಾಗುತ್ತದೆ.. ಆಯ್ಕೆಯು ಅತ್ಯಂತ ಸರಳ.. ಈಗ ಕೇಳಿದ ಹಾಡನ್ನು ನಿಮ್ಮ ಮೆಚ್ಚಿನ ಕಾಲರ ಟ್ಯೂನ್ ಆಗಿ ಆಯ್ಕೆ ಮಾಡಿಕೊಳ್ಳಲು 1ನ್ನು ಒತ್ತಿ, ಇವೆಲ್ಲವೂ ಕೇವಲ ಮಾಸಿಕ ಮೂವತ್ತು ರೂಪಾಯಿಗಳು ಹಾಗು ಡೌನ್ಲೋಡ್ ಗೆ ಬರಿ

ಹದಿನೈದು ರೂಪಾಯಿಗಳನ್ನು ವಿದಿಸಲಾಗುವುದು….” ಇನ್ನೇಕೆ ತಡ ಎಂದು ನೀವು ಕರೆ ದ್ವನಿ(Caller tune) ಸಂಗೀತವನ್ನು ಹಾಕಿಸಿಕೊಳ್ಳುತ್ತೀರಿ… ನೆನಪಿರಲಿ ಪ್ರತಿ ತಿಂಗಳು ನಿಮಗೆ ಮೂವತ್ತು

ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ ಹಾಗು ಪ್ರತಿ ಬಾರಿ ನೀವು ಹೊಸ ಸಂಗೀತದ ಆಯ್ಕೆ ಮಾಡಿಕೊಂಡಾಗಲೂ ಹದಿನೈದು ರೂಪಾಯಿಗಳು ಚಾರ್ಜ್ ಆಗುತ್ತದೆ.. ಪ್ರತಿ ಬಾರಿ ನಿಮ್ಮ ಆಯ್ಕೆ ಬದಲಾಯಿಸಲು ಮೂರು ರೂಪಾಯಿ ಪ್ರತಿ

ನಿಮಿಷಕ್ಕೆ ಕರೆದರಗಳನ್ನು ವಿದಿಸುವಂತ ನಂಬರಿಗೆ ಕರೆಮಾಡಬೇಕಾಗುತ್ತದೆ!.., ಇದು ನಿಮ್ಮ ಆಯ್ಕೆ ನಿಮ್ಮಿಷ್ಟ ಯಾವ ಹಾಡನ್ನಾದರೂ ಹಾಕಿಕೊಳ್ಳಿ ನನ್ನದೇನು ಆಕ್ಷೇಪಣೆ ಇಲ್ಲ.. ಆದರೆ.. ನಿಮಗೆ ಕರೆ ದ್ವನಿ ಸಂಗೀತ ಬೇಡ

ಎನ್ನಿಸಿದ ಕೂಡಲೇ ಸೇವೆಯನ್ನು ರದ್ದುಗೊಳಿಸವುದು ಸ್ವಲ್ಪ ಕಷ್ಟದ ಮಾತೆ ಸರಿ…. ಮತ್ತೆ ನಿಮಿಷಕ್ಕೆ ಮೂರು ರೂಪಯಿಯೋ ಆರು ರೂಪಯಿಯೋ ತೆತ್ತು ಕರೆ ಮಾಡಿ.. ಆಯ್ಕೆಗಳನ್ನು ಒತ್ತುತ್ತಾ ಕನಿಷ್ಟವೆಂದರೂ ಐದರಿಂದ ಆರು

ನಿಮಿಷ ಒದ್ದಾಡಿದ ನಂತರ ನಿಮ್ಮ ಅದೃಷ್ಟ ನೆಟ್ಟಗಿದ್ದರೆ ಕರೆ ದ್ವನಿ ಸೇವೆ ರದ್ದಾಗುತ್ತದೆ….. ಇಲ್ಲವಾದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬಿತ್ತೆಂದೇ ಲೆಖ್ಖ!

ಎಷ್ಟು ಸುಲಭವಾಗಿ ಕರೆದ್ವನಿ(Caller Tune) ಸೇವೆ ಲಭ್ಯವಗುತ್ತದೆಯೋ ಅದರಷ್ಟೆ ಕಷ್ಟ ಸೇವೆಯನ್ನು ರದ್ದು ಪಡಿಸುವುದು.. ನಿಮಗೆ ಕರೆದ್ವನಿ ಸೇವೆ ಪಡೆದುಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ತಿಳಿಸುವ ಬೂಪರು

ರದ್ದು ಪಡಿಸುವ ವಿಧಾನವನ್ನು ಎಲ್ಲೂ ಸಹ ತಿಳಿಸುವುದಿಲ್ಲ.. ನೀವೇ ಕಂಪನಿಯ ಸೇವಾ ಕೇಂದ್ರಕ್ಕೆ ಕರೆ ಮಾಡಿ.. ಮಾಹಿತಿ ನೀಡುವವರು ನಿಮ್ಮ ಕರೆಗೆ ಉತ್ತರಿಸುವ ತನಕ ಮೊಬೈಲ್ ದೂರವಾಣಿಯ ಸಂಗೀತ ಆಲಿಸುತ್ತ ಮದ್ಯ ಬರುವ

“ನಿಮ್ಮ ಕರೆ ನಮಗೆ ಅಮೂಲ್ಯ ದಯವಿಟ್ಟು ನಿರೀಕ್ಷಿಸಿ” ಎನ್ನುವ ತಾಳ್ಮೆ ಪರೀಕ್ಷೆಯನ್ನು ಮಾಡಿಸಿಕೊಂಡು.. ಕಾಲರ್ ಟ್ಯೂನ್ ಕಾನ್ಸೆಲ್ಲಶನ್ ಹೇಗೆ ಎಂದರೆ ಇಷ್ಟುದ್ದ ವಿಧಾನವನ್ನು ತಿಳಿಸುತ್ತಾರೆ.. ಸಾಮನ್ಯವಾಗಿ ಅರ್ಥವಗದಂತೆಯೇ

ಯತಾವತ್ ಪುಸ್ತಕದ ಬಾಷೆಯಲ್ಲಿ ಮಾಹಿತಿಯನ್ನು ನೀಡುತ್ತಾರೆ. ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಕಾಲರ್ ಟ್ಯೂನ್ ಕ್ಯಾನ್ಸಲ್ ಮಾಡಲು ಉಚಿತ ಕರೆ 543211808 ಡಯಲ್ ಮಾಡಿದರೆ ಯಾವುದೇ ಕರ್ಚಿಲ್ಲದೆ ಮರುಕ್ಷಣವೇ

ನಿಮಗೆ ಕರೆ ಮಾಡುವವರಿಗೆ ನಿಮ್ಮ ನೆಚ್ಚಿನ ಟ್ರಿಂಗ್ ಟ್ರಿಂಗ್ ಕೇಳಿಸುತ್ತದೆ!

ಇನ್ನು ಎಸ್.ಎಂ.ಎಸ್ ಸೇವೆಯ ವಿಚಾರಕ್ಕೆ ಬಂದರೆ.. ರಾಷ್ಟ್ರೀಯ ಹಬ್ಬ ಹರಿದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ಎಸ್.ಎಂ.ಎಸ್ ಲಭ್ಯವಿರುವುದಿಲ್ಲ.. ಕಾರಣ ಏನೆಂದರೆ.. ಪ್ರತಿಯೊಬ್ಬ ಗ್ರಾಹಕನು ಎಸ್.ಎಂ.ಎಸ್

ಕಳಿಸುವುದರಿಂದ ಸೇವಾ ಕೇಂದ್ರದಲ್ಲಿ ಒಟ್ಟಿಗೆ ಪ್ರವಾಹದಂತೆ ಹರಿದುಬರುವ ಸಂದೇಶಗಳಿಂದ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತದೆ! ಮೇಲಿನ ಕಾರಣವನ್ನೇ ತಿಳಿಸಿ ಮೊಬೈಲ್ ಸೇವಾ ಕಂಪೆನಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಟ್ರೈ

ನಿಂದ ಕೂಡ ಹಸಿರು ನಿಶಾನೆ ಪಡೆದು ಟ್ರೈ ನ ಕಣ್ಣಿಗೆ ಮಣ್ಣೆರೆಚಿವೆ… ಟ್ರೈ ಕೂಡ ಮೊಬೈಲ್ ಕಂಪನಿಗಳಿಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿವೆ.. ಯಾವ ಯಾವ ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಸಂದೇಶ ಸೇವೆಗಳು

ಲಭ್ಯವಿರುವುದಿಲ್ಲ ಎಂದು ಪ್ರತಿ ಗ್ರಾಹಕನಿಗೆ ಪೂರ್ವ ಮಾಹಿತಿಯನ್ನು ಒದಗಿಸಬೇಕು ಎಂದು.. ಆದರೆ ಚಾಲಕಿ ಸೇವಾದಾತರುಗಳು.. ಮೊದಲು ಮೊದಲು ಕೆಲವು ಬಾರಿ ಚಾಚು ತಪ್ಪದೆ ಮಾಹಿತಿ ನೀಡುತ್ತಾರೆ.. ಅನಂತರ ನಿಮ್ಮ

ಮೊಬೈಲ್ ನಲ್ಲಿ ಸಂದೇಶ ಕಳುಹಿಸಿ ಅಕೌಂಟ್ ನ ಬ್ಯಾಲೆನ್ಸ್ ಕಟ್ ಆದ ಮೇಲೆ ತಿಳಿಯುತ್ತದೆ! ಎಸ್.ಎಂ. ಎಸ್ ವಿಚಾರದಲ್ಲೂ ಕೂಡ ಏರ್ಟೆಲ್ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತದೆ ನೀವು 3days ಅಂಥ 222 ಗೆ ಎಸ್.ಎಂ ಎಸ್

ಕಳುಹಿಸಿದರೆ ಮುಂದಿನ ಯಾವ ಮೂರು ದಿನಗಳಲ್ಲಿ ಉಚಿತ ಅಥವಾ ರಿಯಾಯಿತಿ ದರದ ಎಸ್.ಎಂ .ಎಸ್ ಸೇವೆ ಇರುವುದಿಲ್ಲ ಎನ್ನುವ ಮಾಹಿತಿ ಹೊತ್ತ ಸಂದೇಶ ನಿಮ್ಮ ಮೊಬೈಲಿನ ಇನ್ ಬಾಕ್ಸ್ ನ ಒಳಗಿರುತ್ತದೆ!
ಆದರೆ…. ಮತ್ತೆ ಏನಪ್ಪಾ ಅಂದ್ರ? ಹೂ ಇಲ್ಲೂ ಇದೆ ರಹಸ್ಯ.. 3 ದಿನಗಳ ಪಟ್ಟಿ ಒಮ್ಮೆ ಪ್ರಕಟವಾದರೆ.. ಮುಂದಿನ ಪಟ್ಟಿ ಬಿಡುಗಡೆ ಆದಾಗ ಈ ಹಿಂದೆ ನೀಡಿದ ದಿನಾಂಕದ ಮುಂದಿನ ಅಥವಾ ಹಿಂದಿನ ದಿನಾಂಕದಲ್ಲಿ

ರಿಯಾಯಿತಿ ಸಂದೇಶ ಸೇವೆ ಇಲ್ಲದಿದ್ದರೂ.. ಮೊದಲು ತಿಳಿಸಿದ್ದ ದಿನದಲ್ಲೂ ಸೇವೆ ಇರುವುದಿಲ್ಲ! ಹೊಸ ಪಟ್ಟಿಯಲ್ಲಿ ಆ ದಿನಾಂಕ ಇಲ್ಲದಿದ್ದರೂ ಹಿಂದೆಯೇ ಪ್ರಕಟಸಿದ್ದೇವೆ ಎನ್ನುತ್ತಾರೆ !! 1ರೂಪಾಯಿ ಪ್ರತಿ ಸಂದೇಶಕ್ಕೆ ಪಡೆದು ಹಬ್ಬ

ಹರಿದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದೆ ತೀರುತ್ತವೆ ಈ ಮೊಬೈಲ್ ಕಂಪೆನಿಗಳು…..

ಇನ್ನು worldcup Cricket ನ ಸಮಯದಲ್ಲಂತೂ ತರಾವರಿ Cricket(ಕ್ರಿಕೆಟ್ಟ) ಪ್ಯಾಕ್ ಗಳನ್ನು ಕಂಪೆನಿಗಳು ಗ್ರಾಹಕರಿಗಾಗಿ ಪರಿಚಯಿಸುತ್ತವೆ… ಈ ವಿಚಾರವನ್ನು ಹೇಳಲು ಒಂದು

ಕಾರಣವಿದೆ..ಹಿಂದಿನ ಬಾರಿಯ World cup cricket ನ ಸಮಯದಲ್ಲಿ ನೆಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿಗೆ ರಾತ್ರಿ ೧೨ಘಂಟೆಯ ಸುಮಾರಿನಲ್ಲಿ ಒಂದು

ಸಂದೇಶ ಬಂದಿತ್ತು.. ( ಆಗ ಅವನಿಗೆ ಪರೀಕ್ಷೆಯ ಸಮಯವಾದ್ದರಿಂದ ಮಲಗದೇ ಓದುತ್ತಿದ್ದನಂತೆ ).. ಆ ಸಂದೇಶದ ಸಾರಾಂಶವಿಷ್ಟೇ .. ನೀವು ಕೋರಿದ್ದ 60ರುಪಾಯಿಯ ಕ್ರಿಕೆಟ್ ಪ್ಯಾಕ್ Activate ಆಗಿದೆ

ಎಂದು.. ಇದನ್ನು ಅವನು ನನಗೆ ಮರುದಿನ ಹೇಳುತ್ತಿದ್ದಂತೆ ನಡುವೆ ಬಾಯಿ ಹಾಕಿ ಹೇಳಿದೆ ” ನೀನು ಎಲ್ಲೋ ಕ್ರಿಕೆಟ್ ಪ್ಯಾಕ್ ಗೆ ಬೇಕು ಎಂದು ಎಸ್.ಎಂ.ಯೇಸ್ಸೋ ಏನೋ ಕಳಿಸಿರುತೀಯ ಎಂದು, ” ಅವನು ಹೇಳಿದ್ದು

ತಡಿಯಪ್ಪ” ಎಂದು ಇನ್ನೊಂದು ಸಂದೇಶ ತೋರಿಸಿದ ಅದರ ಸಾರಾಂಶ ಏನೆಂದರೆ .. ನೀವು ಬೇಡಿಕೆ ಸಲ್ಲಿಸಿದ್ದ 30ರುಪಾಯಿ ಕ್ರಿಕೆಟ್ ಪ್ಯಾಕ್ Activate ಆಗಿದೆ ಎಂದು.. ಅವನು ನನ್ನನ್ನು ಕೇಳಿದ್ದಿಷ್ಟು.. ನನಗೇನು

ತಲೆ ಇಲ್ಲವೊ ಅತವಾ ದುಡ್ಡು ಜಾಸ್ತಿ ಆಗಿದೆಯೋ ಎಂದುಕೊಂಡೆಯೋ ಎರೆಡೆರೆಡು ಪ್ಯಾಕ್ ಗಳನ್ನು ಒಟ್ಟಿಗೆ Activate ಮಾಡಲು” ಎಂದು!… ಮುಂದೆ ನಾವಿಬ್ಬರು ಮಾಡಿದ ಕೆಲಸ, ಏರ್ಟೆಲ್ ನ ಕಸ್ಟಮರ್ ಕೇರ್ ಗೆ ಕರೆ

ಮಾಡಿ ವಿಚಾರಿಸದರೆ “ನೀವೇ ಎಸ್.ಎಂ.ಎಸ್. ಕಳ್ಸಿದ್ದೀರ” ಇಲ್ಲಿ ಮಾಹಿತಿ ಇದೆ ಎಂದು…! ನಮ್ಮ ಮುಂದಿನ ಪ್ರಶ್ನೆ 6೦ರುಪಾಯಿ ಪ್ಯಾಕ್ನಲ್ಲಿ ಇರುವ ಸೇವೆಗಿಂತ ಹೆಚ್ಚಿನ ಸೇವೆ 3೦ರುಪಾಯಿ ಪ್ಯಾಕ್ನಲ್ಲಿ ಇದೆಯೇ!..

6೦ರುಪಾಯಿ ಪ್ಯಾಕ್ ಸಾಲದು ಎಂದು ಮೂವತ್ತರ ಪ್ಯಾಕು ಬೇಕು ಎಂದಿದ್ದೆವೆಯೇ ಎಂದು ಕೇಳಿದರೆ.. ಅದೇ ಅಸಡ್ಡೆಯ ಉತ್ತರ “ಇನ್ನು ಸರಿಯಾದ ಮಾಹಿತಿ ದೊರೆಯುತ್ತಿಲ್ಲ 24ಘಂಟೆಯ ನಂತರ ಕರೆ ಮಾಡಿ”.. ಹಾಗಾದರೆ

ಇಷ್ಟೊತ್ತು ಮಾಹಿತಿ ಇದೆ ಎಂದಿರಲ್ಲ ಎನ್ನುವ ಮೊದಲೇ ಕಾಲ್ disconnect ಆಗಿತ್ತು! 24ಘಂಟೆಯಲ್ಲ 1 ವಾರವಾದರೂ ಸಮರ್ಪಕ ಉತ್ತರ ನೀಡದಿದ್ದಾಗ ಸ್ಥಳೀಯ ಬಳಕೆದಾರರ ವೇದಿಕೆಯ ಮೊರೆ ಹೊಕ್ಕು ಕಂಪನಿಯ

ವಿರುದ್ದ ದೂರು ದಾಖಲಿಸಿದ್ದು ಆಗಿತ್ತು.. ಆದರೆ ಗ್ರಾಹಕರ ಹಣ ಕೊಳ್ಳೆಹೊಡೆಯುತ್ತಿರುವ ಕಂಪನಿ ಅಷ್ಟು ಬೇಗನೆ ಜಗ್ಗುತ್ತದೆಯೇ.. ಬರಿ ಪರಿಶೀಲನೆಯ ಉತ್ತರ ಬಂತೆ ವಿನಃ ಪರಿಶೀಲನೆ ಮಾಡಲಿಲ್ಲ.. ಕೊನೆಗೆ ಏನಾಯಿತೋ ಗೊತ್ತಿಲ್ಲ!

ಇಂದು ಗ್ರಾಹಕರ ಸೇವಾ ಕೇಂದ್ರಗಳು ತುಂಬಾ ಅಸಡ್ಡೆಯ ಬಾಯಿಗೆ ಬಂದ ಹಾಗೆ ಉತ್ತರ ನೀಡಿ ಗ್ರಾಹಕರ ಕಂಗೆಣ್ಣಿಗೆ ಗುರಿಯಾಗಿ ಗ್ರಾಹಕರಿಂದ ಬಯ್ಯಿಸಿಕೊಳ್ಳುತ್ತಿವೆ! ಇನ್ನೊಂದು ಮೊನ್ನೆ ಮೊನ್ನೆ ನೆಡೆದ ಘಟನೆಯ ಬಗ್ಗೆ ಹೇಳಲೇ

ಬೇಕಾಗಿದೆ.. ನನ್ನ ಸ್ನೇಹಿತನ ಏರ್ಟೆಲ್ ನಂಬರಿನಿಂದ ಹೊರ ಹೋಗುವ ಕರೆಗಳು ಬ್ಲಾಕ್ ಆಗಿದ್ದವು, ಅದಕ್ಕೆ ನನ್ನ ಏರ್ಟೆಲ್ ನಂಬರಿನಿಂದ ಕಸ್ಟಮರ್ ಕೇರ್ ಗೆ ಕರೆ ಮಾಡಿ ಬೇರೆ ನಂಬರಿನಿಂದ ಕಂಪ್ಲೆಂಟ್ ತಗೋಳಿ ಎಂದು ನನ್ನ ಗೆಳೆಯನ

ನಂಬರ್ ಹೇಳಿದ ತಕ್ಷಣ.. ಅಡ್ರೆಸ್ಸ್ ಹೇಳಿ ಸಾರ್ ಎಂದ.. ನಾನು ಅವನ ಹೆಸರು, ಅಪ್ಪನ ಹೆಸರು.. ಮನೆಯ ಹೆಸರು, ಅಂಚೆ, ಊರು, ತಾಲೂಕು ಜಿಲ್ಲೆ.. ಎಲ್ಲ ಹೇಳಿದ್ದೆ.. ಅತ್ತಲಿಂದ ಕೇಳಿದ್ದೇನು ಎಂದರೆ

ಡೋರ್ ನಂಬರ್ ಹೇಳಿ ಎಂದು.. ಸಾಮನ್ಯವಾಗಿ ಹಳ್ಳಿಗಳಲ್ಲಿ ಡೋರ್ ನಂಬರ್ ನ ಬಳಕೆ ಕಡಿಮೆ.. ಅದು ಅಲ್ಲದೆ ನನ್ನ ಗೆಳೆಯ ನೀಡಿದ್ದ ಡ್ರೈವಿಂಗ್ ಲೈಸೆನ್ಸ್ ಅಡ್ರೆಸ್ಸ್ ಪ್ರೂಫ್ ನಲ್ಲಿ ಯಾವುದೇ ಡೋರ್ ನಂಬರ್ರು ನಮೂದಾಗಿರಲಿಲ್ಲ!!

ನಾನು ಡೋರ್ ನಂಬರ್ ಕೊಟ್ಟಿಲ್ಲ ಎನ್ನುವ ಮೊದಲೇ… ಬಂದ ಉತ್ತರ ಡೋರ್ ನಂಬರ್ ತಿಳಿದುಕೊಂಡು ಕರೆ ಮಡಿ.. ನಿಮ್ಮ ಕಂಪ್ಲೇಂಟ್ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರ ನೀಡಿ. ಕಾಟಾಚಾರಕ್ಕೆ ಶುಭದಿನವನ್ನು ಹೇಳಿ..

ಕರೆ ಮುಕ್ತಾಯ ಗೊಳಿಸಿದ! ನಂತರ ಮತ್ತೆ ಕರೆ ಮಾಡಿದಾಗ ಇನ್ನೊಬ್ಬರು ದೂರನ್ನು ದಾಖಲಿಸಿಕೊಂಡರು…

ಹೀಗೆ ಹೇಳುತ್ತಾ ಹೋದರೆ ಮೊಬೈಲ್ ರಗಳೆ ಮುಗಿಯುವುದೇ ಇಲ್ಲ !

Here is Karnataka customer care numbers for you

Bsnl – 9400024365

Hutch(Vodafone ) 111, 9886098860

Airtel 121, 9845098450 9845012345(for post paid )

Tata indicom 12524, 9243012345

Reliance *333 3033 3333
ಏರ್ಟೆಲ್ ಗ್ರಾಹಕರಿಗೆ ಒಂದು ಹೊಸ ಸುದ್ದಿ
ಕಾಲರ್ ಟ್ಯೂನ್ ಕ್ಯಾನ್ಸಲ್ ಮಾಡಲು ಉಚಿತ ಕರೆ 543211808,

(ಸೂಚನೆ.. ಇದೆ ಲೇಖನವನ್ನು ನನ್ನ ಹಾಗೇ ಸುಮ್ಮನೆ…  ಬ್ಲಾಗ್ ನಲ್ಲಿ ಪ್ರಕಟಣೆ ಮಾಡಿದ್ದೇನೆ,  ಅದೇ ಲೇಖನವನ್ನು.. ಇಲ್ಲಿ ಪುನಃ ಪ್ರಕಟಿಸಿದ್ದೇನೆ.. ಮೊಬೈಲುಗಳ ಬಗೆಗಿನ ಲೇಖನಗಳು ಒಂದೇ ಕಡೆ ಇರಲಿ ಎನ್ನುವ ಕಾರಣದಿಂದ.)

ನಮ್ಮ ದೇಶದ ಅತಿದೊಡ್ಡ ಸೇವಾ ಜಾಲ ಎಂದು ಹೆಗ್ಗಳಿಕೆ ಪಡೆದ (ಬರಿ ದೊಡ್ಡ ಜಾಲ, ಸೇವೆಯ ಗುಣಮಟ್ಟದಲ್ಲಿ ಎಷ್ಟನೆಯ ಸ್ಥಾನವೋ?? ಗೊತ್ತಿಲ್ಲ!) ಬಿ.ಎಸ್.ಎನ್.ಎಲ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದೇ ಬಿಡುಗಡೆ ಮಾಡಲಾದ ಸ್ಟುಡೆಂಟ್ ಪ್ಲಾನ್ ಮೆಗಾ ಮತ್ತು ಸುಪ್ರೀಮ್… ಹೆಸರಿಗೆ ತಕ್ಕಂತೆ ಅಮೋಘ ಸ್ಕೀಮುಗಳು ಅನ್ನಿಸದೇ ಇರಲಾರದು!

ಮೊದಲು ಸುಪ್ರೀಂ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳೋಣ..
1) 30ಪೈಸೆಗೆ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ*
ಯಾವುದೇ ಜಾಹೀರಾತಿನ ಸಾಲಿನ ಜೊತೆ ಸ್ಟಾರ್ (*) ಅಥವಾ (#) ಚಿಕ್ಕ ಚಿನ್ನೆ ಇತ್ತೆಂದರೆ ನೀವು ಗಮನಿಸಬೇಕಾಗಿದ್ದು ಆ ಜಾಹಿರಾತಿನ ಪುಟದ ಕೆಳಕ್ಕೆ ಅಥವಾ ಇನ್ನೆಲ್ಲೋ ಚಿಕ್ಕದಾಗಿ ಬರೆದಿರುವ ಮಾಹಿತಿ (*ಯಾವುದೇ 5 ಬಿ.ಎಸ್.ಎನ್.ಎಲ್ ಕರ್ನಾಟಕದ ಮೊಬೈಲ್ ಗೆ )
2) 2000 ಉಚಿತ ಎಸ್.ಎಂ.ಎಸ್ ಪ್ರತಿ ತಿಂಗಳು
3) ಇತರ ಮೊಬೈಲ್ ಕರೆಗಳು ಕೇವಲ 49 ಪೈಸೆ ಪ್ರತಿ ನಿಮಿಷ
4) ಯಾವುದೇ ದೈನಿಕ ಬಾಡಿಗೆ ಇಲ್ಲ
ಆಕರ್ಷಕ ಯೋಜನೆ ಎಂದಿರಾ? ಸ್ವಲ್ಪ ತಡೆಯಿರಿ, ಇಲ್ಲಿಯವರೆಗೆ ಹೇಳಿದ್ದು ಮೇಲ್ನೋಟದ ಮಾಹಿತಿ.. ಇಲ್ಲಿ ನನಗೆ ಎದುರಾದ ಪ್ರಶ್ನೆ ಎಂದರೆ ಬಿ.ಎಸ್.ಎನ್.ಎಲ್ ನ ಪ್ರಕಾರ ಸುಪ್ರೀಂ ಪ್ಲ್ಯಾನ್ ಎಲ್ಲ ವಿದ್ಯಾರ್ಥಿಗಳಿಗಾಗಿ ಮಾಡಿದ್ದೋ ಅಥವಾ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾಡಿದ್ದೋ ಗೊತ್ತಾಗಲಿಲ್ಲ!!, ಈ ಪ್ಲ್ಯಾನ್ ನಲ್ಲಿ ಗ್ರಾಹಕ ಪ್ರತಿ ತಿಂಗಳು 112 ರೂಪಾಯಿಗಳ ರೀಚಾರ್ಜ್ ಮಾಡಿಸುವುದು ಕಡ್ಡಾಯ!! ಅದಕ್ಕೆ ದೊರೆಯುವ ಮಾತನಾಡುವ ಸಮಯ(Talk time) ಕೇವಲ 30 ರೂಪಾಯಿ!
ಅಂದರೆ ಮೂವತ್ತು ದಿನಕ್ಕೆ ಎಂಬತ್ತೆರೆದು ರುಪಾಯಿ ಶುಲ್ಕ ಕಟ್ಟಲೇ ಬೇಕಾದ್ದು ಅನಿವಾರ್ಯ! ಒಂದು ವೇಳೆ ತಿಂಗಳು ಮುಗಿಯುವುದರ ಒಳಗೆ 2000 ಎಸ್.ಎಂ.ಎಸ್ ಮುಗಿದು ಹೋದರೆ ಮುಂದಿನ ಎಲ್ಲ ಎಸ್.ಎಂ.ಎಸ್ ಗೆ ವಿದಿಸಲಾಗುವ ದರ 0.10/ಪ್ರತಿ ಸಂದೇಶಕ್ಕೆ (ಪ್ರತಿ ದಿನ ನೀವು ಸರಾ ಸರಿ 65 ಎಸ್.ಎಂ.ಎಸ್ ಕಳುಹಿಸಬಹುದು! ) ಅಂದರೆ ದಿನಕ್ಕೆ 65 ಸಂದೇಶಕ್ಕಿಂತ ಹೆಚ್ಚು ಕಳಿಸಿದರೆ ತಿಂಗಳು ಮುಗಿಯುವ ಮುನ್ನವೇ ನಿಮ್ಮ 2000 ಎಸ್.ಎಂ.ಎಸ್ ಸಂದೇಶಗಳು ಕಾಲಿಯಾದೀತು ಜೋಕೆ! )
ಇನ್ನು ಮೆಗಾ ಸ್ಟುಡೆಂಟ್ ಪ್ಲ್ಯಾನ್ ಬಗ್ಗೆ ಹೇಳುವುದಾದರೆ ಇದು ಮತ್ತೊಂದು ರೀತಿ!
ಈ ಪ್ಲಾನ್ ನ ಸಿಂ ಕಾರ್ಡ್ ಗೆ ಕೇವಲ 249ರುಪಾಯಿ ಪಾವತಿಸಿದರೆ ಒಂದು ವರ್ಷ ವಾಯಿದೆ ದೊರೆಯುತ್ತದೆ. ಒಂದು ವರ್ಷ ವಾಯಿದೆ ಮುಗಿದ ನಂತರ ನೀವು ಸ್ಟುಡೆಂಟ್ ಸ್ಟುಡೆಂಟ್ ಆಗಿ ಉಳಿಯುವುದಿಲ್ಲ ?.. ಅಲ್ಲಲ್ಲ ನಿಮ್ಮ Mega ಸ್ಟುಡೆಂಟ್ ಸಿಂ ಸಾಮನ್ಯ ಪ್ರೀಪೈಡ್ ಆಗಿ ಬದಲಾಗಿರುತ್ತದೆ!)
2)ದೈನಿಕ ಬಾಡಿಗೆ ಕೇವಲ 1ರುಪಾಯಿ
3)2000 ಉಚಿತ ಎಸ್.ಎಂ.ಎಸ್
4)Delivery report ಆನ್ ಮಾಡಿಕೊಂಡರೆ ಅದಕ್ಕೂ 10 ಪೈಸೆ ಚಾರ್ಜ್ ಮಾಡಲಾಗುತ್ತದೆ.

ಬೇರೆಲ್ಲ ಮೊಬೈಲ್ ಕಂಪೆನಿಗಳ ಸ್ಟುಡೆಂಟ್ ಪ್ಲ್ಯಾನ್ ಗಳು ಹೆಚ್ಚಾಗಿ ತಿಂಗಳಿಗೆ 3000 ಉಚಿತ ಎಸ್.ಎಂ.ಎಸ್ ಒದಗಿಸುತ್ತಿದ್ದವು, ಈಗ ಬಿ.ಎಸ್.ಎನ್ .ಎಲ್ ನ ಚಾಣಕ್ಷ ತಲೆಯನ್ನು ನೋಡಿ ಇನ್ನೆಲ್ಲಾ ಕಂಪೆನಿಗಳು 1000 ಎಸ್.ಎಂ.ಎಸ್ ಗಳನ್ನು ಕಡಿತ ಮಾಡುವ ಯೋಚನೆ ಮಾಡುವಂತೆ ಮಾಡಿದೆ !
ಪ್ರತಿ ಕರೆಗೆ ಕೇವಲ 49ಪೈಸೆ
ಎಲ್ಲ ಚನ್ನಾಗಿದೆ ಆದರೆ ದೈನಿಕೆ ಬಾಡಿಗೆ ಒಂದು ರುಪಾಯಿಯಂತೆ ಕಟ್ಟಿದರೆ ಮಾತ್ರವೇ ಉಚಿತ ಎಸ್.ಎಮ್.ಎಸ್ ಮಾಡಲು ಸಾದ್ಯ… ತಿಂಗಳಿಗೆ ಬಾಡಿಗೆ ಮೂವತ್ತು ರುಪಾಯಿ ಕಡ್ಡಾಯ ಎಂದು ಅರ್ಥ!

I FEEL INDIAN MOBILE CUSTOMERS DONT GET 80% SATISFACTORY SERVICE FROM ANY MOBILE COMPANY!

ಈವತ್ತಿನವರೆಗೂ ಭಾರತದಲ್ಲಿನ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಒಂದಿದ್ದರೆ ಒಂದಿಲ್ಲ ಎನ್ನುವ ಸೂತ್ರದ ಸೇವೆಯನ್ನೇ ಒದಗಿಸುತ್ತ ಬಂದಿವೆ.. !
ಕರೆ ದರಗಳು ಕಡಿಮೆ ಇದ್ದಲ್ಲಿ SMS ದರ ಅದಿಕವಾಗಿರುತ್ತದೆ ಉದಾಹರಣೆಗೆ ಮೊದಲಿದ್ದ Vodafone Student plan ಆಫರ್
100ಉಚಿತ ಎಸ್.ಎಂ.ಎಸ್ ಪ್ರತಿ ದಿನ ಕೇವಲ 1ಪೈಸೆ ದೈನಿಕ ಬಾಡಿಗೆ!
ಈ ಆಫರ್ ಪ್ಲ್ಯಾನ್ ನಲ್ಲಿ ಇರುವವರು ಕರೆ ಮಾಡುವಂತಿಲ್ಲ!, ಬೇರೆಲ್ಲರೂ 30ಪೈಸೆಗೋ ಅಥವಾ ಹೆಚ್ಚೆಂದರೆ 50ಪೈಸೆ ದರದಲ್ಲಿ ಕರೆ ಮಾಡಿದರೆ ಈ ಪ್ಲ್ಯಾನ್ ನಲ್ಲಿ ಇರುವವನ ಕರೆ ದರ 1ರುಪಾಯಿ ಆಗಿರುತ್ತದೆ, ಸ್ಥಿರ ದೂರವಾಣಿಗೆ 2ರುಪಾಯಿ ಶುಲ್ಕವಿರುತ್ತದೆ.. ಇನ್ನು 30ಪೈಸೆ ಕರೆ ದರದ Tariff ಹೊಂದಿದ ಗ್ರಾಹಕನ ಎಸ್ ಎಮ್.ಎಸ್ ಗೆ 1ರುಪಾಯಿ ದರ ಪ್ರತಿ ಸಂದೇಶಕ್ಕೆ ಚಾರ್ಜ್ ಮಾಡಲಾಗುತ್ತದೆ! ಅಂದರೆ ಈ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಕರೆ ಮಾಡಲು ಕೊಟ್ಟಿರುವುದರಿಂದ ಸಂದೇಶ ಕಳಿಸಲು ದುಬಾರಿ ಬೆಲೆ ತೆರಲೇ ಬೇಕು ಎನ್ನುವ ದೊರಣೆಯೇ??!! ಇದಿಷ್ಟೆ ಅಲ್ಲದೆ ಪ್ರತಿ ಮೊಬೈಲ್ ಕಂಪನಿಗಳು ಗ್ರಾಹಕರನ್ನು ಯಾವ ರೀತಿ ಸುಲಿಗೆ ಮಾಡಲು ಸಾದ್ಯವೋ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಲೇ ಇರುತ್ತವೆ.

ಇನ್ನು Airtel “Aisi azadi our kahan” ಸ್ಲೋಗನ್ ಹಣೆ ಪಟ್ಟಿಯನ್ನು ಮಾತ್ರ ಹೊತ್ತಿದ್ದು , ತಮ್ಮ ಗ್ರಾಹಕರಿಗೆ ಯಾವ ರೀತಿಯ ಸ್ವಾತಂತ್ರ ನೀಡಿದ್ದಾರೋ ದೇವರಾಣೆಗೂ ಅವರಿಗೂ ಗೊತ್ತಿಲ್ಲ, ಗ್ರಾಹಕರ ಹಣ ದೋಚುವ ಎಲ್ಲ ರೀತಿಯ ಆಮಿಷಗಳನ್ನು ಒಡ್ಡುತ್ತಲೇ ಇರುವಲ್ಲಿ Airtel ಮೊದಲನೆ ಸ್ಥಾನ ಪಡೆದುಕೊಂಡಿದೆ,ಇದ್ದ ಬದ್ದ ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕ ಸೇವೆಯ ಕೋರಿಕೆ ಸಲ್ಲಿಸದಿದ್ದರು Activate ಮಾಡಿ ನೀವೇ ಮಾಡಿಕೊಂಡಿದ್ದೀರಿ ಎಂದು ಉಡಾಫೆ ಉತ್ತರಗಳನ್ನು ಕೊಡುವಲ್ಲಿ ಏರ್ಟೆಲ್ ಗ್ರಾಹಕ ಸೇವಾ ಕೇಂಧ್ರದವರದ್ದು ಎತ್ತಿದ ಕೈ.
ನಿಮಗಿಲ್ಲಿ ಪ್ರಶ್ನೆ ಕಾಡುತ್ತಿರಬಹುದು?
ಹೌದು Airtel ಬಗ್ಗೆ ಇಷ್ಟು ಬರೆಯುತ್ತಿರಲ್ಲ ಬರಿ ಕತೆಯೋ? ಕೇಳಿದರೆ “ಇದು ಕತೆ ಅಲ್ಲ ನನ್ನ ಸ್ವಂತ ಅನುಭವ” !!, ಇನ್ನೊಂದು ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ.. ನನ್ನ Airtel ನಂಬರ್ ನ validity ಪ್ರತಿ ಬಾರಿ ಮುಗಿದ ನಂತರ ಕಸ್ಟಮರ್ ಕೇರ್ ಗೆ ಕರೆ ಮಾಡಲು ಹೋದರೆ..”This service not available,Please recharg your account to get this service” ಅಂತಲೇ ಬರುತ್ತದೆ..ಅಂದರೆ ಗ್ರಾಹಕ ಸೇವಾ ಕೇಂದ್ರಕ್ಕೆ(Call Center) ಕರೆ ಮಾಡಲು ಸಹ validity ಮತ್ತು ಅಕೌಂಟ್ನಲ್ಲಿ ಸಾಕಷ್ಟು ಮೊತ್ತ ಇರಲೇ ಬೇಕು ಅಂತಲೋ?!!! ನನಗಿನ್ನೂ ಅರ್ಥವಾಗಿಲ್ಲ![validity ಇದ್ದಾಗಲೂ ಕಾಲ್ ಸೆಂಟರ್ ನವರೊಂದಿಗೆ ಸಂಪರ್ಕ ಅಪರೂಪಕ್ಕೆ ಸಿಕ್ಕುತ್ತದೆ ಅದು ಬೇರೆಯ ವಿಚಾರ] ಭಾರತದಲ್ಲಿ ಯಾವಾಗ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಪೂರ್ಣ ಪ್ರಮಾಣದ ಸಂತೃಪ್ತಿದಾಯಕ ಸೇವಾ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಅಂದರೆ ಗ್ರಾಹಕರಿಗೆ ಹೊರೆಯಾಗದ ವೆಚ್ಚದಲ್ಲಿ ಒದಗಿಸುತ್ತವೆಯೋ ಕಾದು ನೋಡಬೇಕಾಗಿದೆ!ಇದಕ್ಕೆ ಹೊಸದೊಂದು ಮೊಬೈಲ್ ಕ್ರಾಂತಿಯೇ ನಡೆಯಬೇಕೇನೋ!!!

 
For BSNL EXCEL PREPAID AND BSNL ANANTH USERS ONLY!
To activate BSNL free missed call sms alert” when you are out off coverage area or switched off.. get sms containing missed call number along with the time… all above service is free..
To activate go to Call divertion on your handset, in “when out of coverage or not reachable” section input 009117010 send request
(ವಿಪರ್ಯಾಸವೆಂದರೆ.. ಈ ಸೇವೆ ನೀವು ಮೊಬೈಲನ್ನು ನೆಟ್ ವರ್ಕ್ ನಲ್ಲಿ ಇದ್ದುಕೊಂಡು ಸ್ವಿಚ್ ಆಪ್ ಮಾಡಿಕೊಂಡು ವ್ಯಾಪ್ತಿ ಪ್ರದೇಶದ ಹೊರಗೆ ಹೋಗಿ ವಾಪಸ್ ಬಂದಾಗ  ಮಾತ್ರ ಮಿಸ್ಸಡ್ ಕಾಲ್ ಅಲರ್ಟ್ ಮೆಸೇಜುಗಳು ಬರುತ್ತವೆ.. ನೀವು ಹಾಗೆಯೇ ಸಿಗ್ನಲ್ ಸಿಗದ ಕಡೆಗೆ ಹೋಗಿದ್ದರೆ  ಈ ಸೇವೆ ಲಭ್ಯವಾಗುವುದಿಲ್ಲ…!)

 
ನೀವು ಬಿ.ಎಸ್.ಎನ್ .ಎಲ್ ನ ಎಕ್ಸೆಲ್ ಪ್ರೀಪೇಯ್ಡ್ ಸ್ಕೀಮಿನ ಗ್ರಾಹಕರಾಗಿದ್ದರೆ ಸ್ಥಳೀಯ 2 ನಂಬರುಗಳಿಗೆ 20ಪೈಸೆಯ ಕರೆ ದರ ಪಡೆಯಲು ಮತ್ತು ಪ್ರೀಪೇಯ್ಡ್ ಅನಂತ್ ಸ್ಕೀಮಿನ ಗ್ರಾಹಕರಾಗಿದ್ದರೆ ಎರೆಡು ನಂಬರ್ ಗಳಿಗೆ 50ಪೈಸೆಯ ದರದಲ್ಲಿ ಕರೆ ಮಾಡಲು ರಿಜಿಸ್ಟರ್ ಮಾಡಿಕೊಳ್ಳಬೇಕಾದ ವಿಧಾನ

 
FFE ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು ಮತ್ತೊಂದು ಮೊಬೈಲ್ ಸಂಖ್ಯೆ ಅಥವಾ ಇನ್ನೊಂದು ಸ್ಥಿರ ದೂರವಾಣಿಯ ಸಂಖ್ಯೆ ಎಸ್.ಟಿ.ಡಿ ಕೋಡ್ ಜೊತೆ ಟೈಪ್ ಮಾಡಿ ಅದನ್ನು 53733 ಉಚಿತ ಸೇವೆಯ ನಂಬರಿಗೆ ಕಳಿಸಿ..
Send sms in the format below
FFE landline number along with std code mobile number or another landline number along with std code
Send it to 53733 toll free number
For example: FFE 0802xxxxxxx 9xxxxxxxxx
FFE 0802xxxxxxx 081832xxxxx *
* i have shown x insted of numbers, also shown std code and number of digits of land line Varies from place to place.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನೀವು ನೋಂದಣಿ ಮಾಡಿದ ಎರೆಡು ನಂಬರುಗಳನ್ನು ಮುಂದಿನ ಆರು ತಿಂಗಳವರೆಗೆ ಬದಲಾಯಿಸುವಂತಿಲ್ಲ.
ಬಿ.ಎಸ್.ಎನ್ .ಎಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉಚಿತ ಕರೆ ಮಾಡಿ 94000 24365