ಮನಸ್ವಿ ಮೊಬೈಲ್ ಟಾಕ್…

ಬಿಎಸ್ಎನ್ಎಲ್ ಸುಮೋ ಪವರ್ ಸ್ಕೀಮ್

Posted on: ಅಕ್ಟೋಬರ್ 16, 2008

ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವ ಸುಮೋ ಪವರ್ ಸ್ಕೀಮ್ ಬೇರೆಲ್ಲಾ ಬಿಎಸ್ಎನ್ಎಲ್ ಪ್ಲಾನ್ ಗಳಿಗಿಂತಲು ಸದ್ಯಕ್ಕೆ ಚನ್ನಾಗಿದೆ, 249 ರೂಪಾಯಿಗಳ ಸಿಮ್ ಕಾರ್ಡ್ ಪಡೆದರೆ.. ಎರಡು ವರ್ಷ ವಾಯಿದೆಯೊಂದಿಗೆ.. ಎಲ್ಲಾ ಲೋಕಲ್ ಬಿಎಸ್ಎನ್ಎಲ್ ಮೊಬೈಲ್ ಗಳಿಗೆ ಮಾಡುವ ಕರೆಗೆ 59ಪೈಸೆ ಕರೆ ದರ, ಇತರೆ ಮೊಬೈಲುಗಳಿಗೆ ನಿಮಿಷಕ್ಕ್ತೆ 69ಪೈಸೆ ಹಾಗು ಬಿಎಸ್ಎನ್ಎಲ್ ನ ಸ್ಥಳೀಯ 5ನಂಬರಿಗೆ 20ಪೈಸೆ/ನಿಮಿಷ ದರದಲ್ಲಿ ಕರೆ ಮಾಡಬಹುದು(Friends n family pack) ..ಇದರಲ್ಲಿ ಇನ್ನೊಂದು ಉತ್ತಮ ಅಂಶವಿದೆ ಅದೇನೆಂದರೆ ಬಿಸ್ಎನ್ಎಲ್ ನ ಸ್ಥಿರ ದೂರವಾಣಿಯನ್ನು ಸಹ 5ನಂಬರುಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.. ಯಾವುದೇ ದೈನಿಕ ಬಾಡಿಗೆ ಇಲ್ಲ.. ತಿಂಗಳಿಗೆ  500 ಉಚಿತ ಎಸ್.ಎಮ್.ಎಸ್ ಹಾಗು ನಂತರದ ಎಸ್ ಎಮ್ ಎಸ್ ಗೆ 30ಪೈಸೆ ದರವಿರುತ್ತದೆ, ಆದರೆ ಸ್ಥಿರ ದೂರವಾಣಿಗೆ ಮಾಡುವ ಕರೆಯ ದರ 1ರೂಪಾಯಿಯಾಗಿರುತ್ತದೆ..

ಹಾಲಿ ಬಿಎಸ್ಎನ್ಎಲ್ ಗ್ರಾಹಕರು ಕೂಡ ಸುಮೋ ಪವರ್ ಸ್ಕೀಮಿಗೆ ನಿಗದಿತ ಬೆಲೆಯ ರೀಚಾರ್ಜ್ ಮಾಡುವ ಮೂಲಕ ವರ್ಗಾವಣೆ ಆಗಬಹುದು… ಸೂಚನೆ: ಹೊಸ ಪ್ಲಾನ್ ಗೆ ಹಾಲಿ ಚಂದಾದರರು ವರ್ಗಾವಣೆಯಾದರೆ.. ಮುಂಚೆ ಲಭ್ಯವಿದ್ದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ.. ಹಾಗು ಮುಂಚಿನ ವಾಯಿದೆ ನಷ್ಟವಾಗುತ್ತದೆ.. ಒಮ್ಮೆ Friends n family packನಲ್ಲಿ 5 ನಂಬರುಗಳನ್ನು ನೋಂದಣಿ ಮಾಡಿಕೊಂಡಲ್ಲಿ ಮುಂದಿನ 6 ತಿಂಗಳ ತನಕ ಆ 5 ಸಂಖ್ಯೆಗಳನ್ನು ಬದಲಾವಣೆ ಮಾಡುವಂತಿಲ್ಲ

ಹೆಚ್ಚಿನ ಮಾಹಿತಿಗೆ ಹತ್ತಿರದ ಬಿಎಸ್ಎನ್ಎಲ್ ಕೇಂದ್ರಕ್ಕೆ ಬೇಟಿ ಕೊಡಿ ಅಥವಾ  ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ 94000 24365

4 Responses to "ಬಿಎಸ್ಎನ್ಎಲ್ ಸುಮೋ ಪವರ್ ಸ್ಕೀಮ್"

ಬಿಎಸ್ಸೆನ್ನೆಲ್ಲಿನ ವಕ್ತಾರ ಆದ ಹಂಗಿದ್ದು 🙂

ಆದ್ರೆ ಇದು ನಿಜಕ್ಕೂ ಚೆನ್ನಾಗಿರೋ ಪ್ಲಾನ್..

@ M G Harish ಧನ್ಯವಾದಗಳು 🙂 ಹೆಹ್ಹೆ.. ಬಿಎಸ್ಎನ್ಎಲ್ ನವರು ತಗಂಡರೆ ಖಾಸಗಿ ವಕ್ತಾರ ಆಗಕ್ಕೆ ನಾನು ರೆಡಿ.. 🙂

Thank you chaitanya..

ನಿಮ್ಮ ಟಿಪ್ಪಣಿ ಬರೆಯಿರಿ

ಅಕ್ಟೋಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031